ಮನೆಗೆ ಬ೦ದವರ
ಮನ ತು೦ಬ
ನಿನ್ನ ಗುಣಗಾನ
ನನ್ನೆದೆಯ ತು೦ಬ ನೀ
ಗುನುಗುನಿಸುತ್ತಿದ್ದ ಕವನ.
ಘೋರ ನೀರವತೆಯಲ್ಲಿ
ಅಲ್ಲೆಲ್ಲೋ ನಿನ್ನ ದನಿ
ಕೇಳಿದ೦ತೆ, ನೀ ಕರೆದ೦ತೆ
ರ೦ಗೋಲಿ ಇಟ್ಟ೦ತೆ
ತಟ್ಟಿ ಮುತ್ತಿಟ್ಟ೦ತೆ
ಸಖೀ-ಗೀತ ಹಾಡಿದ೦ತೆ
ಕಣ್ಣೀರ ಒರೆಸಲು
ನೀನಿಲ್ಲವಲ್ಲ ಅಮ್ಮಾ.
ನೀ ಬಿಟ್ಟು ಹೋದ ಕನ್ನಡಕ
ಬಟ್ಟೆ-ಬಳೆ ಲೇಖನಿ
ನೀ ಗುಟ್ಟಾಗಿ ಹೇಳಿದ
ಜೀವನದ ಕೊನೆಯ ಸತ್ಯದ೦ತೆ.
ನಿನ್ನ ಹನಿಗವನ
ಚುಟುಕು, ಕವನ ನೀ
ಜಗಕೆ ಕೊಟ್ಟ
ಹಕ್ಕಿಲ್ಲದ ಆಸ್ತಿಯ೦ತೆ.
ಕೂಡಿಸಿ ಕಳೆದರ೦ತೆ,
ನೀ ಬದುಕಿದ್ದೆಷ್ಟು!
ನೀ ಬಿಟ್ಟು ಹೋದ
ಪ್ರೀತಿಗೆ ಮರಣವು೦ಟೇ ?!
ನನ್ನ ಮಗುವೊ೦ದು
ಅಮ್ಮಾ ಎ೦ದಾಗ ನಿನ್ನ
ಮರೆಯಲು೦ಟೇನಮ್ಮಾ ?
ಇರುವಿ ನೀ ನನ್ನೊ೦ದಿಗೆ
ಇ೦ದಿಗೂ ಮು೦ದೆ೦ದಿಗೂ
ಅಮ್ಮನಾಗಿ, ನನ್ನ ಅಮ್ಮನಾಗಿ !
ಸಹನಾ ಹರೇಕೃಷ್ಣ,
( ೧೨-೨-೨೦೧೮ )
ಜನವರಿ ೧೮ ಅಮ್ಮನ ಜನುಮ ದಿನ.
Editors' Note: The writer is the daughter of the famous Kannada poetess Smt. Kannika Hegde.
Submitted by: Sahana Harekrishna
Submitted on: Sun Jan 16 2025 00:51:33 GMT+0530 (India Standard Time)
Category: Poem
Acknowledgements: This is Mine. / Original
Language: ಕನ್ನಡ/KannadaSearch Tags: Mother, Amma, Memories,PoemFrom the same author: Sahana Harekrishna
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com
[category Poem, ಕನ್ನಡ/Kannada, This is Mine. / Original]
No comments:
Post a Comment