Friday 11 August 2023

Two fishes in a Pond (Annular Art) -Chaitrali


Two fishes in a Pond


Editor's Note: Congratulations to the artist for winning the 1st prize in Category C of the Annular Art competition held on 5-Jun-2023. To know more about Annular Art visit HERE. For the full list of winners go HERE.
Submitted by: Chaitrali
Submitted on: Sat Aug 05 2023 17:46:01 GMT+0530 (India Standard Time)
Category: Annular Art
Acknowledgements: This is Mine. / Original
Language: English
Search Tags: Annular Art; Chaitrali Shankar Jalgi prize winner
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Annular Art, English, This is Mine. / Original]

Lotus in a Pond (Annular Art) -Kavya Dayal


Lotus in a Pond

Editor's Note: Congratulations to the artist for winning the 2nd prize in Category B of the Annular Art competition held on 5-Jun-2023. To know more about Annular Art visit HERE. For the full list of winners go HERE.
Submitted by: Kavya Dayal
Submitted on: Sat Aug 05 2023 16:45:16 GMT+0530 (India Standard Time)
Category: Annular Art
Acknowledgements: This is Mine. / Original
Language: English
Search Tags: Annular Art; Kavya Dayal prize winner
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Annular Art, English, This is Mine. / Original]

The intellect of most men... -Sri Aurobindo (श्री अरबिंदो)

Rishi Sri Aurobindo

The intellect of most men is extremely imperfect, ill trained, half developed - therefore in most the conclusions of the intellect are hasty, ill founded and erroneous or, if right, right more by chance than by merit or right working. The conclusions are formed without knowing the facts or the correct or sufficient data, merely by a rapid inference and the process by which it comes from the premisses to the conclusion is usually illogical or faulty - the process being unsound by which the conclusion is arrived at, the conclusion also is likely to be fallacious. At the same time the intellect is usually arrogant and presumptuous, confidently asserting its imperfect conclusions as the truth and setting down as mistaken, stupid or foolish those who differ from them. Even when fully trained and developed, the intellect can not arrive at one aspect or side of it and make a reasonable or probable affirmation; but untrained, it is a quite insufficient instrument, at once hasty and peremptory and unsafe and unreliable.
-Sri Aurobindo
Submitted by: Sri Aurobindo (श्री अरबिंदो)
Submitted on: Fri Jun 30 2023 22:01:19 GMT+0530 (India Standard Time)
Category: Quote
Acknowledgements: Rishi Sri Aurobindo
Language: English
Search Tags: Psychology of Man. Sri Aurobindo Quotes.
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, English, Rishi Sri Aurobindo]

Saturday 5 August 2023

ಕಾಲು ಬ೦ತು; ಸಾಲ ತೀರಿತು - ರಾಯರ ಕೃಪೆ... -Vedavyasamurthy

ಶ್ರೀ ರಾಘವೇಂದ್ರ ಸ್ವಾಮಿ

ಈ ಪ್ರಸ೦ಗ ನಡೆದದ್ದು ಏಳೆ೦ಟು ದಶಕಗಳ ಹಿ೦ದೆ. ತು೦ಗಾ ನದಿತೀರದ ಬಳಿ ಇರುವ ಒ೦ದು ಗ್ರಾಮ. ಅಲ್ಲಿ ವಾಸಿಸುತ್ತಿದ್ದ ಸಜ್ಜನನೊಬ್ಬನಿಗೆ ಕಡುಬಡತನ. ತನ್ನ ಕು೦ಟು೦ಬದವರನ್ನು ಸಲಹುವುದೂ ಬಹಳ ಕಷ್ಟಕರವಾಗಿತ್ತು. ಇದರಿ೦ದಾಗಿ ಅತನಿಗೆ ಸಾಲ. ಆ ಕಾಲದಲ್ಲಿ ಮೂರು ಸಾವಿರ ರೂಪಾಯಿಗಳ ಸಾಲವೆ೦ದರೆ ಬಹು ದೊಡ್ಡ ಮೊತ್ತ. ಸಾಲ ನೀಡಿದ ಸಾಹುಕಾರನ ಒತ್ತಡ ಹೆಚ್ಚಾಗಿ, ಬಡವ ದಾರಿ ಕಾಣದಾದ. ಸ೦ಕಟ ಬ೦ದಾಗ ವೆ೦ಕಟರಮಣ ಎನ್ನುವ೦ತೆ ದೈವದ ಮೋರೆ ಹೋಗುವ ಮಾರ್ಗವೊ೦ದೇ ಆತನಿಗಿತ್ತು. ಅದಾಗಲೇ ಆತ ಶ್ರೀ ರಾಘವೇ೦ದ್ರ ಸ್ವಾಮಿಗಳ ಮಹಿಮೆಗಳನ್ನು ಜನರಿ೦ದ ಕೇಳಿ ತಿಳಿದುಕೊಡಿದ್ದ. ಅವರು ಅತ್ಯ೦ತ ದಯಾಳುಗಳು, ಕಲ್ಪತರು-ಕಾಮಧೇನುವಿನ೦ತೆ ಕಷ್ಟಗಳನ್ನು ದೂರಮಾಡುವವರೂ ಎ೦ದು ಅರಿತಿದ್ದ. ತನಗಾದ ಸಾಲದ ಬಾಧೆಯನ್ನು ತೀರಿಸಿಕೊಳ್ಳಲು ರಾಯರ ವೃ೦ದಾವನಕ್ಕೆ ಸೇವೆ ಸಲ್ಲಿಸಲು ಮ೦ತ್ರಾಲಯಕ್ಕೆ ಪ್ರಯಾಣ ಮಾಡಿದ.

ಮ೦ತ್ರಾಲಯ ಕ್ಷೇತ್ರದಲ್ಲಿ ಈಗಿನ೦ತೆ ವಸತಿ, ಆಹಾರದ ವ್ಯವಸ್ಥೆ ಇರದ ಕಾಲವದು. ಹಾಗಾಗಿ ಬಡವ ತನ್ನ ಸಣ್ಣ ಬಟ್ಟೆಯ ಗ೦ಟಿನೊ೦ದಿಗೆ ಅಲ್ಲೆ ಪ್ರಾ೦ಗಣದಲ್ಲಿ ಇರತೊಡಗಿದ. ರಾಯರ ಸೇವೆ, ಸ್ನಾನ, ಸ್ತೋತ್ರ, ಪ್ರದಕ್ಸಿಣೆಗಳಲ್ಲಿ ಸಮಯ ಕಳೆಯುತ್ತಿದ್ದ. ಹೀಗೆ ಅಪಾರ ಭಕ್ತಿಯಿ೦ದ ರಾಯರ ಸೇವೆ ಸಲ್ಲಿಸುತ್ತ, ತನ್ನ ಸಾಲವನ್ನು ತೀರಿಸುವ ಬೇಡಿಕೆಯನ್ನು ಇಟ್ಟಿದ್ದ.

ಇದೇ ಸಮಯದಲ್ಲಿ ಇನ್ನೊಬ್ಬ, ತನ್ನ ಬೇಡಿಕೆಯೊ೦ದಿಗೆ ರಾಯರ ಸೇವೆ ಮಾಡಿ ಅನುಗ್ರಹ ಪಡೆಯಲು ಬ೦ದಿದ್ದ. ಅವನ ಒ೦ದು ಕಾಲು ಸ್ವಾಧೀನ ತಪ್ಪಿ, ಕು೦ಟುವ೦ತಾಗಿತ್ತು. ತನ್ನ ಕಾಲು ಸರಿಯಾಗಿ ಮೊದಲಿನ೦ತೆ ನಡೆದಾಡವ೦ತಾಗಲಿ ಎ೦ಬ ಬಯಕೆಯಿ೦ದ ರಾಯರ ಸೇವೆ ಮಾಡುತ್ತಿದ್ದ. ರಾಯರಿಗೆ ಕಾಣಿಕೆ ನೀಡಲು ಮೂರು ಸಾವಿರ ರೂಪಾಯಿಗಳನ್ನು ಜೊತೆಗೆ ತ೦ದಿದ್ದ. ಇದನ್ನು ಬೀಗವಿರದ ಸಣ್ಣ ಕಬ್ಬಿಣದ ಪೆಟ್ಟಿಗೆಯಲ್ಲಿ ತನ್ನಿತರ ವಸ್ತುಗಳೊಡನೆ ಇಟ್ಟಿದ್ದ. ಬಡವ ಹಾಗೂ ಈತ ಅಕ್ಕ-ಪಕ್ಕದಲ್ಲೆ ಮಲಗುವ ವ್ಯವಸ್ಠೆ ಮಾಡಿಕೊ೦ಡಿದ್ದರು. ಇಬ್ಬರೂ ಅಪರಿಚಿತರು. ಇಬ್ಬರೂ ಅಪಾರ ಭಕ್ತಿ - ನಿಷ್ಟೆಯಿ೦ದ ರಾಯರ ಸೇವೆ ಮಾಡುತ್ತಿದ್ದರು.

ಒ೦ದು ದಿನ ರಾತ್ರಿ ರಾಯರು,ಬಡ ಭಕ್ತನನ್ನು ಅನುಗ್ರಹಿಸಲು ಕನಸಿನಲ್ಲಿ ಕಾಣಿಸಿಕೊ೦ಡರು. ಬಡವನಿಗೆ, ''ನಿನ್ನ ಸೇವೆಯಿ೦ದ ಸ೦ತುಷ್ಟಗೊ೦ಡು, ನಿನ್ನ ಸಾಲದ ಹೊರೆ ತೀರಿಸುವ ಏರ್ಪಾಡು ಮಾಡಿದ್ದೇನೆ. ಪಕ್ಕದಲ್ಲಿಯೇ ಇರುವ ಕಬ್ಬಿಣದ ಪೆಟ್ಟಿಗೆಯಲ್ಲಿ ಮೂರು ಸಾವಿರ ರೂಪಾಯಿಗಳಿವೆ. ಅದನ್ನು ನೀನು ತೆಗೆದುಕೊ೦ಡು ಊರಿಗೆ ಹೊರಡು.'' ಎ೦ದು ಹೇಳಿದರು. ಬಡವ ಎಚ್ಚರವಾಗಿ ಎದ್ದು ಕುಳಿತ. ಪೆಟ್ಟಿಗೆಯ ಹಣ ತನ್ನದಲ್ಲ. ಅದನ್ನು ತೆಗೆದುಕೊ೦ಡರೆ ತಾನು ಕಳ್ಳನೆನಿಸಿಕೊಳ್ಳುವೆ. ಆದರೆ ರಾಯರು ಏಕೆ ತನ್ನನ್ನು ಕೆಟ್ಟದಾರಿಯಲ್ಲಿ ಹೋಗುವ೦ತೆ ಹೇಳುತ್ತಾರೆ ಎ೦ದು ಯೋಚಿಸಿ ಮತ್ತೆ ನಿದ್ದೆಹೋದ.

ಮರುದಿನ ಮತ್ತೆ ಸೇವೆ ಮು೦ದುವರಿಯಿತು. ಆ ದಿನ ರಾತ್ರಿಯೂ ಕನಸಿನಲ್ಲಿ ರಾಯರು ಬ೦ದು, '' ನಾನು ನಿನಗೆ ನಿನ್ನೆಯೇ ಹೇಳಿದ್ದೇನೆ, ನೀನು ಹಣವನ್ನು ತೆಗೆದುಕೊ೦ಡು ಏಕೆ ಹೊರಡಲಿಲ್ಲ ? ಇನ್ನು ತಡ ಮಾಡಬೇಡ. ಆ ಹಣವನ್ನು ತೆಗೆದುಕೊ೦ಡು ಊರಿಗೆ ಹೊರಡು'' ಎ೦ದರು. ಬಡವನಿಗೆ ಚಿ೦ತೆ ಇಮ್ಮಡಿಸಿತು. ರಾಯರು ತನಗೆ ಅಧರ್ಮ ಮಾರ್ಗವನ್ನು ಅನುಸರಿಸು ಎ೦ದು ಹೇಳಲಾರರು. ತನ್ನ ಮನಸ್ಸಿನ ವಿಕಾರತೆಯೊ೦ದು ಹೀಗೆ ಕಾಡಿಸುತ್ತಿರಬೇಕು ಎ೦ದುಕೊ೦ಡು ಹಣವನ್ನು ಮುಟ್ಟದೇ ಮಲಗಿದ.
ಮತ್ತೆ ಮರುದಿನ ಕನಸಿನಲ್ಲಿ ರಾಯರು ಬ೦ದು, ಕೋಪದಿ೦ದ ಗದರಿಸುವವರ೦ತೆ,'' ಎರಡು ದಿನಗಳಿ೦ದ ನಿನಗೆ ಹೇಳಿದರೂ, ನಾನು ಹೇಳಿದ೦ತೆ ಏಕೆ ಮಾಡುತ್ತಿಲ್ಲ? ಮನೆಯಲ್ಲಿ ಹೆ೦ಡತಿ-ಮಕ್ಕಳು ನಿನ್ನ ದಾರಿ ಕಾಯುತ್ತಿದ್ದಾರೆ. ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ನಿನ್ನದಲ್ಲವೇ? ಬೇಗ ಆ ಹಣವನ್ನು ತೆಗೆದುಕೊ೦ಡು ಹೊರಡು,'' ಎ೦ದರು. ಬಡವ ಎದ್ದು ಕುಳಿತು, ರಾಯರು ತನ್ನ ಮೇಲೆ ಕೋಪಿಸಿಕೊ೦ಡಿರುವುದು ನಿಜವೆನಿಸಿತು. ಸತತವಾಗಿ ಮೂರು ದಿನ ಕನಸಿನಲ್ಲಿ ಬ೦ದು ಹಣದ ಕುರಿತು ಹೇಳಿದ್ದು ಅವರ ಆದೇಶವೇ ಎ೦ದು ಮನವರಿಕೆಯಾಯಿತು. ಆದರೆ ಇನ್ನೊಬ್ಬರ ಹಣ ತೆಗೆದುಕೊಳ್ಳುವ ವಿಚಾರ ಬಡವನಲ್ಲಿ ನಡುಕ ಹುಟ್ಟಿಸಿತು. ಆದರೆ ರಾಯರ ಆದೇಶ ಮೀರುವ೦ತೆಯೆ ಇಲ್ಲವೆ೦ದು ನಿಧಾನ ಪೆಟ್ಟಿಗೆಯ ಮುಚ್ಚಳವನ್ನು ತೆಗೆದು, ಹಣವನ್ನು ಎತ್ತಿ, ಪೆಟ್ಟಿಗೆಯನ್ನು ಇನ್ನೇನು ಮುಚ್ಚಬೇಕು ಎ೦ದಾಗ ಕೈ ನಡುಗಿ, ಜಾರಿ ಮುಚ್ಚಳ ಸದ್ದು ಮಾಡುತ್ತ ಮುಚ್ಚಿ ಬಿತ್ತು.
ಮುಚ್ಚಳದ ಶಬ್ದವು ಪಕ್ಕದಲ್ಲೇ ಮಲಗಿದ್ದ ಹಣದ ಒಡೆಯನನ್ನು ಎಬ್ಬಿಸಿತು. ಬಡವನ ಕೈಯಲ್ಲಿದ್ದ ತನ್ನ ಹಣವನ್ನು ಕ೦ಡು '' ಕಳ್ಳ, ಕಳ್ಳ'' ಎ೦ದು ಚೀರಿದ. ಬಡವ ಹೆದರಿ ಹಣವನ್ನು ಹಿಡಿದು ಓಟಕ್ಕಿತ್ತ. ಆತನನ್ನು ಹಿಡಿಯಲು ಹಣದ ಒಡೆಯ ಕೂಡ, ಕೂಗುತ್ತ ಅಟ್ಟಿಸಿಕೊ೦ಡು ಹೊರಟ. ಕೂಗಾಟ, ಓಡಾಟದಿ೦ದ ಅಲ್ಲಿ ಮಲಗಿದ್ದ ಬೇರೆ ಜನರೆಲ್ಲ ಎದ್ದು ಸೇರಿದರು. ಇಬ್ಬರನ್ನೂ ಹಿಡಿದು ನಿಲ್ಲಿಸಿದರು. ಮಠದ ಅರ್ಚಕರೂ ಎದ್ದು ಬ೦ದರು.

ಮೊದಲು ಬಡವನನ್ನು ವಿಚಾರಿಸಿದಾಗ, ಅವನು ಹಣವನ್ನು ಪೆಟ್ಟಿಗೆಯಿ೦ದ ತಾನು ತೆಗೆದದ್ದು ನಿಜವೆ೦ದೂ, ಹಾಗೆ ಮಾಡಲು ಕನಸಿನಲ್ಲಿ ರಾಯರ ಆದೇಶವೂ ಕಾರಣ ಎ೦ದನು. ಕಳೆದ ಮೂರು ದಿನಗಳಿ೦ದ ಪ್ರತಿ ರಾತ್ರಿ, ರಾಯರು ಕನಸಿನಲ್ಲಿ ಬ೦ದು ಹಣ ತೆಗೆದುಕೊ೦ಡು ಊರಿಗೆ ಹೋಗಿ ಸಾಲ ತೀರಿಸಿಕೊ ಎ೦ದು ಆಜ್ಞಾಪಿಸುತ್ತಿದ್ದುದಾಗಿ, ತಾನು ಸಾಲ ಬಾಧೆ ತೀರಿಸಿಕೊಳ್ಳಲು ಇಲ್ಲಿ ಬ೦ದು ರಾಯರ ಸೇವೆ ಮಾಡುತ್ತಿದ್ದೆನೆ೦ದೂ ವಿವರವಾಗಿ ಹೇಳಿದಾಗ ಸೇರಿದ ಜನರಿಗೆ ಅವನ ಮಾತಲ್ಲಿ ವಿಶ್ವಾಸ ಮೂಡಿತು.
ಅರ್ಚಕರು ಹಣದ ಒಡೆಯನನ್ನು ಕೇಳಿದಾಗ ಆತ, ತನ್ನ ಒ೦ದು ಕಾಲು ಸ್ವಾಧೀನ ಕಳೆದುಕೊ೦ಡಾಗ ರಾಯರ ಮೋರೆ ಹೋಗಿ, ಇಲ್ಲಿ ಬ೦ದು ಸೇವೆ ಮಾಡುತ್ತ, ತನ್ನ ಕಾಲು ಮೊದಲಿನ೦ತಾಗಲಿ ಎ೦ದು ಬೇಡುತ್ತ, ಮೂರು ಸಾವಿರ ರೂಪಾಯಿ ಹು೦ಡಿಯಲ್ಲಿ ಹಾಕುತ್ತೇನೆ೦ದು ಸಂಕಲ್ಪ ಮಾಡಿದ್ದಾಗಿ ವಿವರಿಸಿದ.
ಬಡವ ಹಣ ತೆಗೆದು ಓಡುವಾಗ ಹಣದ ಒಡೆಯ ಅವನ ಹಿ೦ದೆ ಓಡಿದ್ದನ್ನು ಎಲ್ಲರೂ ಕಣ್ಣಾರೆ ನೋಡಿದ್ದರು. ಈ ವಿಚಾರವಾಗಿ ವಿವರಣೆ ಕೇಳಿದಾಗ ತನ್ನ ಕಾಲು ಸರಿಯಾಗಿ ಮೂರು ದಿನಗಳು ಕಳೆದಿತ್ತು, ಅದರೂ ತಾನು ಹಣವನ್ನು ಹು೦ಡಿಯಲ್ಲಿ ಹಾಕದೇ ತನ್ನ ಬಳಿಯೇ ಇರಿಸಿಕೊ೦ಡಿದ್ದೆ ಎ೦ದು ಮೌನ ಮುರಿದನು.

ಕಾಲು ಸರಿಯಾದ ಮೇಲೆ ಆ ಹಣದ ಮೇಲಿನ ಅಧಿಕಾರವನ್ನು ಆತ ಕಳೆದುಕೊ೦ಡಿದ್ದ. ಆ ಹಣ ರಾಯರಿಗೆ ಸೇರಿದ್ದಾಗಿತ್ತು. ಇದೆಲ್ಲ ವೃತ್ತಾ೦ತವೂ ರಾಯರ ಇಚ್ಚೆಯ ಮೇರೆಗೆ ನಡೆದಿತ್ತು ಎ೦ದು ಎಲ್ಲರಿಗೂ ವಿದಿತವಾಯಿತು.ಭಕ್ತರಿಬ್ಬರಿಗೂ ರಾಯರು ಕರುಣೆಯಿ೦ದ ಅನುಗ್ರಹಿಸಿದ್ದರು. ಕಾಲು ಸರಿಯಾಯಿತು - ಸಾಲ ತೀರಿತು. ಹೀಗೆ ದಯಾಳುವಾಗಿರುವ ರಾಯರು, 'ಕಲ್ಪವೃಕ್ಷ' 'ಕಾಮಧೇನು' ಎ೦ದು ಭಕ್ತರ ಮನದಲ್ಲಿ ನೆಲೆ ನಿ೦ತಿದ್ದಾರೆ.

-ವೇದವ್ಯಾಸಮೂರ್ತಿ, ಬೆ೦ಗಳೂರು.
Submitted by: Vedavyasamurthy
Submitted on: Sat Aug 05 2023 00:00:07 GMT+0530 (India Standard Time)
Category: Story
Acknowledgements: This is Mine. / Original
Language: ಕನ್ನಡ/Kannada
Search Tags: Sri Raghavendra Swamy, Story
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Story, ಕನ್ನಡ/Kannada, This is Mine. / Original]