Thursday, 20 April 2017
ಕರೆದುಕೊ೦ಡು ಹೋಗೆನ್ನನು ನಿನ್ನ ಜಗದೊಳಗೆ -Shri.Ginde
ಹುಡುಕುತಿರುವೆನು ನನ್ನನ್ನು ನಾನು ನನ್ನೊಳಗೆ
ಕೂಗುತಿರಲು ನನ್ನ ಮೌನವು ನನಗೆ,
ಕನಸಾಗಿವೆ. ಕನಸುಗಳು, ನನ್ನ ಕನಸೊಳಗೆ;
ಏಲ್ಲೋ ಬಂದೀಯಾಯಿತು ನನ್ನ ಮಾತು,
ಮೌನವೆ ಆವರಿಸಿತು ನನ್ನೊಳಗೆ.
ಕಾರಣವ ತಿಳಿಯೆನು ಯಾವ ದೆಸೆಯಿ೦ದ,
ಬಿಡಿಸೆನ್ನನು ಈ ಬಂದೀಖಾನೆಯಿ೦ದ
ಕರೆದುಕೊ೦ಡು ಹೋಗೆನ್ನನು ಆ ಕಡಲೆಡೆಗೆ
ಕೂಗುತಿರಲು ನಾನು ನನ್ನೊಳಗೆ;
ಕರೆದುಕೊ೦ಡು ಹೋಗೆನ್ನನು ನಿನ್ನ ಜಗದೊಳಗೆ.
ಸೋತಿರುವೆ ನಾನು ಮೌನದಿ ಶರಣಾಗಿ,
ಮುನಿಸಿರುವೆ ನಾನು ನನ್ನೊಳಗೆ
ಚುಚ್ಚುತಿರಲು ಆ ನಿ೦ದನೆಗಳು ಮುಳ್ಳಿನ೦ತೆ,
ನಿ೦ದನೆಗಳೇಕೆ ಎಲ್ಲೆಡೆ ನನ್ನನೆ ಮುತ್ತಿಕೊ೦ಡ೦ತೆ.
ಬಿಡಿಸೆನ್ನನು ಈ ಮುಳ್ಳಿನಾ ಪೊದೆಯಿ೦ದ
ಕರೆದುಕೊ೦ಡು ಹೋಗೆನ್ನನು ಆ ಕಡಲೆಡೆಗೆ,
ಕೂಗುತಿರಲು ನಾನು ನನ್ನೊಳಗೆ;
ಕರೆದುಕೊ೦ಡು ಹೋಗೆನ್ನನು ನಿನ್ನ ಜಗದೊಳಗೆ
ತು೦ಡು,ತು೦ಡಾದ ಈ ಕ್ಷಣವು, ಸಮಯವು; ಒಡೆದ ಗಾಜಿನ೦ತೆ,
ಮಿಸುಕಾಡುತ್ತಿರುವೆ ನಾನು ಗಾಳಕ್ಕೆಸಿಕ್ಕ ಮೀನಿನ೦ತೆ,
ನೆನಪಿನ ಅ೦ಗಳವು ನಾನು ತೆರೆದಿಡಲು ಪುಸ್ತಕದ ಪುಟದ೦ತೆ,
ಬತ್ತಿಹೋಗಿದೆ ಅ೦ಗಳದ ಕೆರೆಯು ಮರಳುಗಾಡಿನ೦ತೆ
ಬಿಡಿಸೆನ್ನನು ಈ ಮೌನದಾ ಗಾಳದಿಂದ,
ಕರೆದುಕೊ೦ಡು ಹೋಗೆನ್ನನು ಆ ಸು೦ದರ ಕಡಲೆಡೆಗೆ,
ನಿಸಗ೯, ಪ್ರೀತಿಯ ಆ ಸವಿಗಾನದ ಮಾತಿನೆಡೆಗೆ,
ಕರೆದುಕೊ೦ಡು ಹೋಗೆನ್ನನು ನಿನ್ನ ಜಗದೊಳಗೆ...!
-Shri.Ginde
Photo By:
Submitted by: Shri.Ginde
Submitted on: Thu Apr 13 2017 15:49:16 GMT+0530 (IST)
Category: Original
Language: ಕನ್ನಡ/Kannada
- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit
Wednesday, 19 April 2017
ಯುಗಾದಿ -Shri.Ginde
ಬಾಳಿನ ಸಿಹಿ-ಕಹಿ ಒ೦ದಾಗಿ ಸವಿಯಲು
ಯುಗಾದಿ, ಚೈತ್ರಮಾಸದ ಗಾನವು
ಚಿಗುರುತಿರಲು ನವ ಚೈತನ್ಯ, ಉಲ್ಲಾಸ ಹಷ೯ವು,
ನವೋದಯ ಈ ಯುಗಾದಿ, ಹೊಸ ವಷ೯ವು
ಚೆಲ್ಲಲೀ ನಮ್ಮ ಬಾಳಲಿ ಹೊಸ ಬೆಳಕನು
ಬೇವು-ಬೆಲ್ಲದ ಮಿಶ್ರಣವು, ತು೦ಬಲಿ ಬಾಳಲಿ ಹೊಸರುಚಿಯನು
ತಿ೦ದು ನಲಿಯುವಾ ಸ೦ತಸದಲಿ; ಮರೆಯುವಾ ಮತ್ಸರ ನಿಮಿಷದಲಿ
ಸೌರಮಾನವಿರಲಿ, ಚ೦ದ್ರಮಾನವಿರಲಿ; ಪವೋ೯ಲ್ಲಾಸ ಹರಡಿದೆ ಎಲ್ಲೆಡೆ
ಕೈ-ಬಿಸಿ ಹೊಸ ಸ೦ವತ್ಸರ ಕರೆದಿದೆ ತನ್ನೆಡೆ.
ಯುಗಾದಿ ಋತುಗಳ ವೈಭವವು
ವಷ೯ಕ್ಕೊ೦ದು ಹೊಸತು ಜಗದ ಜನನವು
ಮರೆಸಲು ದುಃಖ - ದುಮ್ಮಾನಗಳನು
ತೊಳೆದಿದೆ ಒಳಮನಸಿನ ಕೊಳಕನು
ಬೆರೆಯಲಿ ಕಹಿ ನೆನಪುಗಳು, ಸಿಹಿ ಸ೦ತೋಷದಲಿ
ಬೆರೆಯಲಿ ಮನಸುಗಳು, ಋತುಗಳ ಸಮ್ಮಿಲನದಲಿ
ಕರುಣಿಸಲಿ ಬಾಳಲಿ ಸುಖ: -ಶಾ೦ತಿಯನು
ಯುಗಾದಿ, ಚೈತ್ರಮಾಸದ ಗಾನವು
ಚಿಗುರುತಿರಲು ನವ ಚೈತನ್ಯ, ಉಲ್ಲಾಸ ಹಷ೯ವು,
ನವೋದಯ ಈ ಯುಗಾದಿ, ಹೊಸ ವಷ೯ವು
ಹೊಸವಷ೯ದ ಆದಿ ಆರ೦ಭಿಸುವಾ ಹಷ೯ದಿ
ಹಳೆಯದೆಲ್ಲ ಕೂಡಿ- ಕೂಡಿ ಹೊಸ ಅನುಭವ
ಚಿಗುರುತಿರಲು ನವ ಚೈತನ್ಯ, ಉಲ್ಲಾಸ ಹಷ೯ವು,
ನವೋದಯ, ಹೊಸ ವಷ೯ವು "ಯುಗಾದಿ"
ಯುಗಾದಿ.!
-Shri.Ginde
Photo By:
Submitted by: Shri.Ginde
Submitted on: Fri Apr 14 2017 15:09:44 GMT+0530 (IST)
Category: Original
Language: ಕನ್ನಡ/Kannada
- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit
Thursday, 6 April 2017
ಇದುವೇ ಜೀವನ -Suki
ನಿನ್ನೆ ನಾಳೆಯ ಯೋಚನೆ ಮನದಿಂದ ದೂರವಾಗಿಸು
ಜೀವನ ಬರೀ ಇಂದು ಎಂದು ನೀ ಭಾವಿಸು
ನಿನ್ನ ಹಿತೈಶಿಗಳೊಂದಿಗೆ ಬಾಳ ಬಂಡಿಯ ನಡೆಸು
ಯಾರು ಜೊತೆ ಇರದಿರಲು ಪ್ರಕೃತಿಯನು ಆಲಂಗಿಸು
ಸರಿ ತಪ್ಪುಗಳ ನಿಧಾ೯ರಕ್ಕೆ ನಿನ್ನಾತ್ಮವ ಆಲಿಸು
ಸುಖವಿರಲಿ ದುಃಖವಿರಲಿ ಸಮ ಚಿತ್ತದಿ ಬದುಕ ಸಾಗಿಸು
ನಿನ್ನ ಕಷ್ಟದಲ್ಲಿ ಜೊತೆಗಿರುವರ ಕೊನೆತನಕ ನೆನಪಿಸು
ನೀ ಸಂತಸವಾಗಿರಲು ನಿನ ನೋಯಿಸಿದವನ ಕ್ಷಮಿಸು
ಈಗಿರುವ ನೋವು ನಾಳೆ ಇರದೆಂದು ಜ್ಞಾಪಿಸು
ನೀ ಇದ್ದಂತೆ ಈ ಜಗ, ನಿನ್ನ ಹೆದರಿಸಿದರೆ ನೀ ಅಬ್ಬರಿಸು
ಸೋತರೆ ಗಟ್ಟಿಯಾಗುವೆಯಷ್ಟೇ ಗೆಲ್ಲಲು ಮರು ಪ್ರಯತ್ನಿಸು
ಕತ್ತಲಾಗಲು ಹಗಲು, ಈ ರಾತ್ರಿ
ಎಲ್ಲಾ ಮರೆತು ನಿದ್ರಿಸು
ಪ್ರತಿ ಹಗಲು ಹೊಸ ಹಾದಿ ನೀ ಜನಿಸಿದ ನವ ಕೂಸು
ಹೊಸ ಆಟ ಹೊಸ ಪಾಠ ಹೊಸ ಜನರ ಪರಿಚಯಿಸು
ಸಿಹಿ ಇರಲಿ ಕಹಿ ಇರಲಿ ಅನುಭವಗಳ ಕೊಡ ತುಂಬಿಸು
ಅವಕಾಶ ಗಳ ಬಿಡದೆ ಪ್ರತಿ ನಿಮಿಷ ಆನಂದಿಸು
ಬಾಳ ಪಯಣವಿದು ಪ್ರತಿ ಕ್ಷಣವ ನೀ ಅನುಭವಿಸು
ಬದುಕಿದ ದಿನವೆಲ್ಲಾ ಸರಿಯಾದದನ್ನೇ ಸಾಧಿಸು
ಎಲ್ಲಾ ದಕ್ಕೂ ಕೊನೆ ಇದೆ ನಿನ್ನ ತೀರಕ್ಕೆ ದೋಣಿ ಹಾಯಿಸು
ಎಲ್ಲವೂ ಅಶಾಶ್ವತ ವಿಲ್ಲಿ ಶಾಶ್ವತ ನೆಮ್ಮದಿಯ ಅರಸು
-Suki
Photo By:
Submitted by: Suki
Submitted on: Wed Apr 05 2017 14:56:30 GMT+0530 (IST)
Category: Original
Language: ಕನ್ನಡ/Kannada
- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit
ದಾರಿ -Vinaya Gowda
ಕಾಣದ ದಾರಿಯಲ್ಲಿ ನಡೆಯುತ್ತಿರುವೆ ನಾನು.
ಕಂಡರೂ ಕಾಣದಂತೆ ನಡೆಯುತ್ತಿರುವೆ ನೀನು.
ಕಾಲಿಗೆ ಚುಚ್ಚಿದ ಮುಳ್ಳು ಹೇಳುತ್ತಿದೆ ಇದು ಸರಿ ದಾರಿಯಲ್ಲವೆಂದು.
ಕಾಣದ ದಾರಿಯಲ್ಲಿ ನಡೆಯುತ್ತಿರುವೆ ನಾನು....
ಕೂಗಿದರು ಕೇಳದಂತೆ ನಡೆಯುತ್ತಿರುವೆ ನೀನು.
ಕಾಲಿಗೆ ತಗುಲಿದ ಕಲ್ಲು ಹೇಳುತ್ತಿದೆ ಇದು ಕಲ್ಲಿನ ದಾರಿಯೆಂದು.
ಕತ್ತಲಲ್ಲಿ ಬೆಳಕಿನ ಕನಸು ಕಾಣುವ ಮನಸ್ಸಿಗೆ
ಕಾಣದಿರುವ ದಾರಿಯಲ್ಲಿ ಬೆಳಕನ್ನು ಕಾಣುವ ಹಂಬಲ ಸಾಗಿದೆ
ಪಯಣ ಗುರಿ ಮುಟ್ಟುವವರೆಗೆ ಸರಿ ದಾರಿಯ ಹಾದಿ ಹಿಡಿಯುವವರೆಗೆ
-Vinaya Gowda
Photo By:
Submitted by: Vinaya Gowda
Submitted on: Tue Mar 21 2017 16:28:26 GMT+0530 (IST)
Category: Original
Language: ಕನ್ನಡ/Kannada
- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit
Subscribe to:
Posts (Atom)