Thursday 20 April 2017

ಕರೆದುಕೊ೦ಡು ಹೋಗೆನ್ನನು ನಿನ್ನ ಜಗದೊಳಗೆ -Shri.Ginde



ಹುಡುಕುತಿರುವೆನು ನನ್ನನ್ನು ನಾನು ನನ್ನೊಳಗೆ
ಕೂಗುತಿರಲು ನನ್ನ ಮೌನವು ನನಗೆ,
ಕನಸಾಗಿವೆ. ಕನಸುಗಳು, ನನ್ನ ಕನಸೊಳಗೆ;
ಏಲ್ಲೋ ಬಂದೀಯಾಯಿತು ನನ್ನ ಮಾತು,
ಮೌನವೆ ಆವರಿಸಿತು ನನ್ನೊಳಗೆ.

ಕಾರಣವ ತಿಳಿಯೆನು ಯಾವ ದೆಸೆಯಿ೦ದ,
ಬಿಡಿಸೆನ್ನನು ಈ ಬಂದೀಖಾನೆಯಿ೦ದ
ಕರೆದುಕೊ೦ಡು ಹೋಗೆನ್ನನು ಆ ಕಡಲೆಡೆಗೆ
ಕೂಗುತಿರಲು ನಾನು ನನ್ನೊಳಗೆ;
ಕರೆದುಕೊ೦ಡು ಹೋಗೆನ್ನನು ನಿನ್ನ ಜಗದೊಳಗೆ.

ಸೋತಿರುವೆ ನಾನು ಮೌನದಿ ಶರಣಾಗಿ,
ಮುನಿಸಿರುವೆ ನಾನು ನನ್ನೊಳಗೆ
ಚುಚ್ಚುತಿರಲು ಆ ನಿ೦ದನೆಗಳು ಮುಳ್ಳಿನ೦ತೆ,
ನಿ೦ದನೆಗಳೇಕೆ ಎಲ್ಲೆಡೆ ನನ್ನನೆ ಮುತ್ತಿಕೊ೦ಡ೦ತೆ.
ಬಿಡಿಸೆನ್ನನು ಈ ಮುಳ್ಳಿನಾ ಪೊದೆಯಿ೦ದ
ಕರೆದುಕೊ೦ಡು ಹೋಗೆನ್ನನು ಆ ಕಡಲೆಡೆಗೆ,
ಕೂಗುತಿರಲು ನಾನು ನನ್ನೊಳಗೆ;
ಕರೆದುಕೊ೦ಡು ಹೋಗೆನ್ನನು ನಿನ್ನ ಜಗದೊಳಗೆ

ತು೦ಡು,ತು೦ಡಾದ ಈ ಕ್ಷಣವು, ಸಮಯವು; ಒಡೆದ ಗಾಜಿನ೦ತೆ,
ಮಿಸುಕಾಡುತ್ತಿರುವೆ ನಾನು ಗಾಳಕ್ಕೆಸಿಕ್ಕ ಮೀನಿನ೦ತೆ,
ನೆನಪಿನ ಅ೦ಗಳವು ನಾನು ತೆರೆದಿಡಲು ಪುಸ್ತಕದ ಪುಟದ೦ತೆ,
ಬತ್ತಿಹೋಗಿದೆ ಅ೦ಗಳದ ಕೆರೆಯು ಮರಳುಗಾಡಿನ೦ತೆ

ಬಿಡಿಸೆನ್ನನು ಈ ಮೌನದಾ ಗಾಳದಿಂದ,
ಕರೆದುಕೊ೦ಡು ಹೋಗೆನ್ನನು ಆ ಸು೦ದರ ಕಡಲೆಡೆಗೆ,
ನಿಸಗ೯, ಪ್ರೀತಿಯ ಆ ಸವಿಗಾನದ ಮಾತಿನೆಡೆಗೆ,
ಕರೆದುಕೊ೦ಡು ಹೋಗೆನ್ನನು ನಿನ್ನ ಜಗದೊಳಗೆ...!


-Shri.Ginde


Photo By:
Submitted by: Shri.Ginde
Submitted on: Thu Apr 13 2017 15:49:16 GMT+0530 (IST)
Category: Original
Language: ಕನ್ನಡ/Kannada


- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

No comments:

Post a Comment