Thursday, 6 April 2017
ಇದುವೇ ಜೀವನ -Suki
ನಿನ್ನೆ ನಾಳೆಯ ಯೋಚನೆ ಮನದಿಂದ ದೂರವಾಗಿಸು
ಜೀವನ ಬರೀ ಇಂದು ಎಂದು ನೀ ಭಾವಿಸು
ನಿನ್ನ ಹಿತೈಶಿಗಳೊಂದಿಗೆ ಬಾಳ ಬಂಡಿಯ ನಡೆಸು
ಯಾರು ಜೊತೆ ಇರದಿರಲು ಪ್ರಕೃತಿಯನು ಆಲಂಗಿಸು
ಸರಿ ತಪ್ಪುಗಳ ನಿಧಾ೯ರಕ್ಕೆ ನಿನ್ನಾತ್ಮವ ಆಲಿಸು
ಸುಖವಿರಲಿ ದುಃಖವಿರಲಿ ಸಮ ಚಿತ್ತದಿ ಬದುಕ ಸಾಗಿಸು
ನಿನ್ನ ಕಷ್ಟದಲ್ಲಿ ಜೊತೆಗಿರುವರ ಕೊನೆತನಕ ನೆನಪಿಸು
ನೀ ಸಂತಸವಾಗಿರಲು ನಿನ ನೋಯಿಸಿದವನ ಕ್ಷಮಿಸು
ಈಗಿರುವ ನೋವು ನಾಳೆ ಇರದೆಂದು ಜ್ಞಾಪಿಸು
ನೀ ಇದ್ದಂತೆ ಈ ಜಗ, ನಿನ್ನ ಹೆದರಿಸಿದರೆ ನೀ ಅಬ್ಬರಿಸು
ಸೋತರೆ ಗಟ್ಟಿಯಾಗುವೆಯಷ್ಟೇ ಗೆಲ್ಲಲು ಮರು ಪ್ರಯತ್ನಿಸು
ಕತ್ತಲಾಗಲು ಹಗಲು, ಈ ರಾತ್ರಿ
ಎಲ್ಲಾ ಮರೆತು ನಿದ್ರಿಸು
ಪ್ರತಿ ಹಗಲು ಹೊಸ ಹಾದಿ ನೀ ಜನಿಸಿದ ನವ ಕೂಸು
ಹೊಸ ಆಟ ಹೊಸ ಪಾಠ ಹೊಸ ಜನರ ಪರಿಚಯಿಸು
ಸಿಹಿ ಇರಲಿ ಕಹಿ ಇರಲಿ ಅನುಭವಗಳ ಕೊಡ ತುಂಬಿಸು
ಅವಕಾಶ ಗಳ ಬಿಡದೆ ಪ್ರತಿ ನಿಮಿಷ ಆನಂದಿಸು
ಬಾಳ ಪಯಣವಿದು ಪ್ರತಿ ಕ್ಷಣವ ನೀ ಅನುಭವಿಸು
ಬದುಕಿದ ದಿನವೆಲ್ಲಾ ಸರಿಯಾದದನ್ನೇ ಸಾಧಿಸು
ಎಲ್ಲಾ ದಕ್ಕೂ ಕೊನೆ ಇದೆ ನಿನ್ನ ತೀರಕ್ಕೆ ದೋಣಿ ಹಾಯಿಸು
ಎಲ್ಲವೂ ಅಶಾಶ್ವತ ವಿಲ್ಲಿ ಶಾಶ್ವತ ನೆಮ್ಮದಿಯ ಅರಸು
-Suki
Photo By:
Submitted by: Suki
Submitted on: Wed Apr 05 2017 14:56:30 GMT+0530 (IST)
Category: Original
Language: ಕನ್ನಡ/Kannada
- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit
Subscribe to:
Post Comments (Atom)
No comments:
Post a Comment