ಅಮ್ಮ, ಶಾಲೆಗೆ ನಾಳೆ ಹೋಗುವೆ
ಇಂದು ಮಳೆಯೊಡನೆ ಆಡಬೇಕು
ಪುಟ್ಟ ಕಾಗದದ ದೋಣಿಗಳಿವೆ
ಅವು ತೇಲುವುದನ್ನು ನೋಡಬೇಕು
ಚಪ್ಪಾಳೆ ತಟ್ಟಿ ಕುಣಿಯಬೇಕು
ಅಮ್ಮ, ಶಾಲೆಗೆ ನಾಳೆ ಹೋಗುವೆ
ಇಂದು ಹಸಿರು ಗದ್ದೆಯಲ್ಲಿ ಓಡಬೇಕು
ಕೆಸರಿನಲಿ ಬಿದ್ದು ಉರುಳಾಡಬೇಕು
ಬಣ್ಣ ಬಣ್ಣದ ಪಾತರಗಿತ್ತಿಗಳಿವೆ
ಅವು ಹಾರುವುದನ್ನು ನೋಡಬೇಕು
ಅಮ್ಮ, ಶಾಲೆಗೆ ನಾಳೆ ಹೋಗುವೆ
ಇಂದು ತೋಟದಲ್ಲಿ ಆಡಬೇಕು
ಮರಗಳ ಜೊತೆ ಗೆಳೆತನ ಬೆಳೆಸಬೇಕು
ರುಚಿರುಚಿಯಾದ ಹಣ್ಣುಗಳಿವೆ
ಅವುಗಳ ಸವಿಯನ್ನು ಎಲ್ಲರಿಗೂ ಹಂಚಬೇಕು
ಅಮ್ಮ, ಶಾಲೆಗೆ ಹೋಗಲೇ ಬೇಕೇ?
ಶಾಲೆಗೆ ಹೋಗುವುದಿಲ್ಲವಲ್ಲ ಆಡು-ಮೇಕೆ
ನಿಸರ್ಗವೇ ಹೇಳಿಕೊಡುವುದು ಪಾಠ
ಕಲಿಕೆಯ ಜೊತೆಯಲ್ಲೇ ಸಾಗುವುದು ನನ್ನ ಆಟ
ಅಮ್ಮ, ಇನ್ನು ಬೇಡವೇ ಬೇಡ ಶಾಲೆಯ ಕಾಟ!
-Madhubala
Photo By:
Submitted by: Madhubala
Submitted on: Mon Jan 21 2019 12:53:50 GMT+0530 (IST)
Category: Original
Language: ಕನ್ನಡ/Kannada
- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit