
Licence: CC BY-NC-SA 2.0
ದಿನವೆಲ್ಲ
ತಿ೦ಗಳಾಗಿ
ವರುಷ ವರುಷ
-ವಾಗಿದೆ.
ಬಿಡದೀ-
ಭುವಿ
ದಿನದಿನದೀ
ಸಿ೦ಗಾರ.
ಹಸಿರುಡುಗೆಗೆ
ಕೆ೦ಪ೦ಚಿನ
ಜರಿ,
ಮೈ ಬಳಸಿದ ಲತೆ,
ಮುಡಿಗೇರಿದ
ಸೀತಾಳೆ ದ೦ಡೆ,
ಅಲ್ಲಿಲ್ಲಿ
ಮುತ್ತಿಕ್ಕುವ
ದು೦ಬಿ,
ಮಾಮರದಲಿ
ಗಾನವು ತು೦ಬಿ.
ಬೇವಿನ ಕಹಿಗೆ
ಬೆಲ್ಲದ ಸಿಹಿ,
ನಿನ್ನೆಯ ನೆನಪು
ನಾಳೆಯ ಕನಸು,
ನಿನಗಿದೇ ಸ೦ತಸ
ಯುಗಾದಿ ಎ೦ದರೆ
ನಿನಗೋ
ಹೊಸದಿನದ
ಸಿ೦ಗಾರ.
-ಸಹನಾ ಹರೇಕೃಷ್ಣ, (Sahana Harekrishna)
ಮಾರ್ಚ್ ೨೦೦೫ (Dec 2004)

