Thursday, 28 July 2022

ದೀಪಾವಳಿ -Prabhakar Hegde

ಬದುಕು ಬೆಳಗಲಿ
ಸಾಲು ದೀಪಗಳ ಬೆಳಕಿನಲಿ
ನಡೆಯುವೆನು ನನಗದೇ
ದೀಪಾವಳಿ

ಹೆಜ್ಜೆ ಹೆಜ್ಜೆಗೆ ಇರಲಿ
ಹೊಳೆವ ಹಣತೆಯ ಬೆಳಕು
ದಾರಿಯುದ್ದಕು ನಡೆವ
ದೂರದಲ್ಲಿ

ಇರಳು ಆಗಸದಲ್ಲಿ
ಇರಲಿ ತಾರೆಯ ಬೆಳಕು
ಹಣತೆ ಮಿನುಗಲಿ ಇಲ್ಲಿ
ನೆಲದೆದೆಯಲಿ

ಬಾನ ಬೆಳಕಿಲ್ಲಿ
ಮುತ್ತಿಡಲಿ ಹಣತೆಯನು
ಹಣತೆ ಮಿನುಗುತಿರಲಿ
ನೀರವದಲಿ

ಇರಲಿ ದೀಪಾವಳಿಯು
ನಿತ್ಯವೂ ನಮಗಿಲ್ಲಿ
ನೆಲಬಾನ ಸಿರಿಬೆಳಕ
ಸ೦ಗದಲ್ಲಿ !

-ಪ್ರಭಾಕರ ಹೆಗಡೆ , ಹೊನ್ನಾವರ.

Submitted by: Prabhakar Hegde
Submitted on: Tue Mar 22 2022 06:44:15 GMT+0530 (IST)
Category: Poem
Acknowledgements: This is Mine. / Original
Language: ಕನ್ನಡ/Kannada
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Poem, ಕನ್ನಡ/Kannada, This is Mine. / Original]

No comments:

Post a Comment