ಹಿ೦ದೆ ಒ೦ದು ಊರಿನಲ್ಲಿ
ಒಬ್ಬ ಗಿಡ್ಡನಿದ್ದನು
ಅಲ್ಲ ಅವನು ಬುದ್ಧಿವ೦ತ
ದಡ್ದ ಕೂಡ ಅಲ್ಲವು
ಕೇಳಿ
ಅವನ ಊರ ಜನರು
ಹೇಳಿದ೦ತ ಕಥೆಯನು
ಗಿಡ್ಡನ ಗಡ್ಡದ ಕಥೆ
ಗಿಡ್ಡನ ಗಡ್ಡ
ಉದ್ದಕೆ ಬೆಳೆಯಿತು
ಕುತ್ತಿಗೆದಾಟಿ
ಎದೆವರೆಗೆ
ಊರವರೆಲ್ಲ
ಗಡ್ಡದ ಗಿಡ್ಡ
ಎ೦ದೇ ಕರೆಯಲು
ಗಿಡ್ಡನಿಗಾಯಿತು ಬೇಜಾರು
'' ಕತ್ತರಿ ಬೇಡ, ಬ್ಲೇಡೂ ಬೇಡ
ಸುಲಭದಿ ತೆಗೆಯುವೆ ಗಡ್ದವನು ''
ಎನ್ನುತ ಗಿಡ್ದನು
ಉರಿಯುವ ಮೇಣದ ಬತ್ತಿಯ
ತ೦ದನು ಖುಷಿಯಲ್ಲಿ
ಗಡ್ಡದ ಕೂದಲ
ಕೈಯಲಿ ಹಿಡಿದು
ಉರಿಯನು ಇಟ್ಟನು ಗಡ್ಡಕ್ಕೆ
ಗಡ್ಡವ ಸುಟ್ಟಿತು
ಬುರು ಬುರು ಬೆ೦ಕಿಯು
ಬೆದರಿದ ಗಿಡ್ಡನು
ಕೈಬಿಟ್ಟ
ಗಡ್ಡಕೆ ಹತ್ತಿದ ಬೆ೦ಕಿಯು
ಸುಟ್ಟಿತು
ಗಡ್ಡದ ಕೂದಲು
ಮುಖ ಮೋರೆ
ಊರವರೆಲ್ಲ ನಕ್ಕರು ಅ೦ದರು
'' ಗಡ್ಡದ ಗಿಡ್ಡ ಬ೦ದ
ಗಡ್ಡ ಈಗ ಚ೦ದ ! ''
-ಪ್ರಭಾಕರ ಹೆಗಡೆ
ಹೊನ್ನಾವರ.
Submitted by: Prabhakar Hegde
Submitted on: Tue Mar 22 2022 06:52:30 GMT+0530 (IST)
Category: Poem
Acknowledgements: This is Mine. / Original
Language: ಕನ್ನಡ/Kannada
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com
[category Poem, ಕನ್ನಡ/Kannada, This is Mine. / Original]
No comments:
Post a Comment